ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

wrappixel kit

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು

ರಾಯಚೂರು ವಿಜ್ಞಾನ ಕೇಂದ್ರವು ದಿನಾಂಕ: 12.11.1997 ರಂದು ಸ್ಥಾಪನೆಗೊಂಡಿದ್ದು, ದಿನಾಂಕ: 18.11.2015 ರಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗಿ  ಮೇಲ್ದರ್ಜೆಗೇರಿಸಲಾಗಿರುತ್ತದೆ. ವಿಜ್ಞಾನ ಕೇಂದ್ರದ ಕಟ್ಟಡ ಪ್ರದೇಶದ ಸುತ್ತಳತೆಯು ಸುಮಾರು 700.00 ಚ.ಮೀ. ಗಳಾಗಿದ್ದು, ಇದು ವಿನೋದ ವಿಜ್ಞಾನ ಗ್ಯಾಲರಿ, ಜೀವವಿಜ್ಞಾನ ಗ್ಯಾಲರಿ,ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಗ್ರಂಥಾಲಯ, ತಾತ್ಕಾಲಿಕ ಪ್ರದರ್ಶನಾ ಸ್ಥಳ, ಚಟುವಟಿಕಾ ಸ್ಥಳ, ಸಭಾಂಗಣ, ಇತರೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಕೇಂದ್ರವು ಕಳೆದ ಎರಡು ದಶಕಗಳಿಂದ ರಾಯಚೂರು ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ, ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರಿಗೆ ಅನೇಕ ವಿಜ್ಞಾನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬರುತ್ತಿದೆ.  

ಕೇಂದ್ರದ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ವಾರ್ಷಿಕ ಅನುದಾನವನ್ನು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಬೆಂಗಳೂರು ಇವರ ಮೂಲಕ ಬಿಡುಗಡೆಗೊಳಿಸುತ್ತಿದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS